ಕೊನೆಯ ಪರಿಷ್ಕರಣೆಯ ದಿನಾಂಕ: ಸೆಪ್ಟೆಂಬರ್‌26, 2014

SWYPE ಜೊತೆ DRAGON DICTATION ಅಂತಿಮ ಬಳಕೆದಾರರ ಪರವಾನಿಗಿ ಒಪ್ಪಂದ

ಇದು ನಿಮ್ಮ (SWYPE ಮತ್ತು DRAGON DICTATION ಅಪ್ಲಿಕೇಶನ್ಸ್ ಬಳಸುತ್ತಿರುವ ವ್ಯಕ್ತಿ ಅಥವಾ ಸಂಸ್ಥೆ) ಮತ್ತು NUANCE COMMUNICATIONS, INC. ನಡುವಿನ ಕಾನೂನುಬದ್ಧ ಒಪ್ಪಂದವಾಗಿದೆ. ("NUANCE"). ಕೆಳಗಿನ ನಿಯಮಗಳನ್ನುದಯವಿಟ್ಟು ಜಾಗರೂಕತೆಯಿಂದ ಓದಿರಿ.

SWYPE ತಂತ್ರಾಂಶ ಮತ್ತು/ಅಥವಾ DRAGON DICTATION ಸೇವೆಯನ್ನು ಅನುಸ್ಥಾಪಿಸಲು ಮತ್ತು ಅದನ್ನು ಬಳಸಲು, ಈ ಅಂತಿಮ ಬಳಕೆದಾರ ಪರವಾನಿಗಿ ಒಪ್ಪಂದದ ("ಒಪ್ಪಂದ") ನಿಯಮಗಳಿಗೆ ನೀವು ಸಮ್ಮತಿಸಬೇಕು . "ಒಪ್ಪಿಗೆ" ಬಟನ್ ಕ್ಲಿಕ್ ಮಾಡುವ ಮೂಲಕ, ನೀವು ಈ ಒಪ್ಪಂದದ ನಿಯಮಗಳಿಗೆ ಬದ್ಧರಾಗಿರಲು ಒಪ್ಪಿರುತ್ತೀರಿ. ನೀವುಮತ್ತು ನಿಯಮಗಳು ಮತ್ತು ಷರತ್ತುಗಳಿಗೆ ಒಪ್ಪದಿದ್ದರೆ, SWYPE ತಂತ್ರಾಂಶ ಮತ್ತು DRAGON DICTATION ಸೇವೆಯನ್ನು ನೀವು ಯಾವುದೇ ರೀತಿಯಲ್ಲಿ ಬಳಸುವುದು ಸಾಧ್ಯವಾಗದಿರಬಹುದು

SWYPE ತಂತ್ರಾಂಶ ಮತ್ತು DRAGON DICTATION ಸೇವೆಗಳು ಕೆಲವು ಕ್ಲೈಂಟ್‌/ಸರ್ವರ್ ಅಪ್ಲಿಕೇಶನ್‌ಗಳನ್ನು ಹೊಂದಿದ್ದು, ಇವು ಫಠ್ಯ ಹಾಗೂ ಇಮೇಲ್ ಸಂದೇಶಗಳನ್ನು ರಚಿಸುವ ಸಾಮರ್ಥ್ಯಯನ್ನು ಒಳಗೊಂಡು ಆದರೆ ಇಷ್ಟಕ್ಕೇ ಸೀಮಿತವಾಗಿಲ್ಲದೇ ಸಾಧನದ ಬಳಕೆದಾರರಿಗೆ ಅಂತಹ ಸಾಧನಗಳ ಕೆಲವು ಕಾರ್ಯನಿರ್ವಹಣೆಗಳನ್ನು ಪಠ್ಯ ಇನ್‌ಪುಟ್ ಮತ್ತು ಮಾತಿನ ಕಮಾಂಡ್‌‌ಗಳ ಮೂಲಕ ನಿಯಂತ್ರಿಸಲು ಅನುಮತಿಸುತ್ತವೆ. ಕೆಳಗೆ ವಿವರಿಸಿದಂತೆ ನಿಮಗೆ Nuance ಹಾಗೂ ಇದರ ಪೂರೈಕೆದಾರರು ಲಭ್ಯವಾಗಿಸುವ Swype ತಂತ್ರಾಂಶ ("ತಂತ್ರಾಂಶ"), ಇದು ಪಠ್ಯ ಇನ್‌ಪುಟ್ ಮೊಡಾಲಿಟಿಯನ್ನು ಒದಗಿಸುತ್ತದೆ ಮತ್ತು ಬಳಕೆದಾರರಿಗೆ Nuance ಸೌಲಭ್ಯದಲ್ಲಿ ಸ್ಥಾಪಿಸಿರುವ Dragon Dictation ಸರ್ವರ್ ಅಪ್ಲಿಕೇಶನ್‌‌ಗಳನ್ನು ("ಸೇವೆ") ಪ್ರವೇಶಿಸುವುದಕ್ಕೆ ಅವಕಾಶ ಒದಗಿಸುತ್ತದೆ ಹಾಗೂ ತಂತ್ರಾಂಶವನ್ನುಬಳಸಲುಮತ್ತು ಸೇವೆಯನ್ನು ಪಡೆದುಕೊಳ್ಳಲು Nuance ಒದಗಿಸುವ ಇದರೊಂದಿಗಿನ ಯಾವುದೇ ದಾಖಲೀಕರಣವನ್ನು ಡೌನ್‌ಲೋಡ್ ಮಾಡಲು, ಅನುಸ್ಥಾಪಿಸಲು ಮತ್ತು ಬಳಸಲು ಕೆಳಗಿನ ಸಾಮಾನ್ಯ ಷರತ್ತುಗಳು ಮತ್ತು ನಿಬಂಧನೆಗಳು ನಿಯಂತ್ರಿಸುತ್ತವೆ

1. ಪರವಾನಿಗಿ ನೀಡಿಕೆ. Nuance ಮತ್ತು ಇದರ ಪೂರೈಕೆದಾರರು ನಿಮಗೆ ಪ್ರತ್ಯೇಕವಲ್ಲದ, ವರ್ಗಾವಣೆ ಮಾಡಲಾಗದ, ಮರು ಪರವಾನಿಗಿ ನೀಡಲು ಸಾಧ್ಯವಿಲ್ಲದ, ಹಿಂತೆಗೆದುಕೊಳ್ಳಬಲ್ಲ ಸೀಮಿತ ಪರವಾನಿಗಿಯನ್ನು, ಆಬ್ಜೆಕ್ಟ್ ಕೋಡ್ ಫಾರ್ಮ್‌ನಲ್ಲಿ ಮಾತ್ರ ಒಂದೇ ಸಾಧನದಲ್ಲಿ ಹಾಗೂ ಸೇವೆಯನ್ನು ಅಂತಹ ಸಾಧನದಲ್ಲಿ ತಂತ್ರಾಂಶದ ಮೂಲಕ, Nuance ಮತ್ತು ಇದರ ಪೂರೈಕೆದಾರರು ಲಭ್ಯವಾಗಿಸುವ ದೇಶ ಮತ್ತು ಭಾಷೆಗಳಲ್ಲಿ ತಂತ್ರಾಂಶ ಹಾಗೂ ಸೇವೆಯನ್ನು ಅನುಸ್ಥಾಪಿಸಲು ಮತ್ತು ಬಳಸಲು ನೀಡಿರುತ್ತಾರೆ. "ಸಾಧನ" ಎಂದರೆ Nuance ಕಾಲಕಾಲಕ್ಕೆ ನವೀಕರಿಸಬಹುದಾದ http://www.nuancemobilelife.com, ನಲ್ಲಿ ಇರುವ Nuance ವೆಬ್‌ಸೈಟ್‌ನಲ್ಲಿ ವಿವರಿಸಿರುವಂತೆ ಅಧಿಕೃತವಾದ ಮೊಬೈಲ್ ಸಾಧನವಾಗಿದೆ. Nuance ಹೆಚ್ಚುವರಿ ತಂತ್ರಾಂಶ ಡೌನ್‌ಲೋಡ್‌‌ಗಳನ್ನು ಭಾಷೆಗಳು, ಕೀಬೋರ್ಡ್‌‌ಗಳು, ಶಬ್ದಕೋಶಗಳನ್ನು ಒಳಗೊಂಡು ಲಭ್ಯವಾಗಿಸಿಬಹುದಾಗಿದ್ದು,ಇವು ಅಷ್ಟಕ್ಕೇ ಸೀಮಿತವಾಗಿರುವುದಿಲ್ಲ ಮತ್ತು ನೀವು ಇಲ್ಲಿ ನೀಡಿರುವ ತಂತ್ರಾಂಶದೊಂದಿಗಿನ ಅಂತಹ ತಂತ್ರಾಂಶ ಡೌನ್‌ಲೋಡ್‌‌ಗಳನ್ನು, ನೀವು ಮಾತ್ರ ಬಳಸಬಹುದು ಮತ್ತು ಅಂತಹ ಹೆಚ್ಚುವರಿ ತಂತ್ರಾಂಶ ಡೌನ್‌ಲೋಡ್‌‌ಗಳ ಬಳಕೆಯು ಈ ಒಪ್ಪಂದದ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿದೆ ಎನ್ನುವುದನ್ನು ನೀವು ಇದರೊಂದಿಗೆ ಅಂಗೀಕರಿಸುತ್ತೀರಿ ಮತ್ತು ಒಪ್ಪಿಕೊಳ್ಳುತ್ತೀರಿ. ನೀವು ತಂತ್ರಾಂಶ ಮತ್ತು ಸೇವೆ ಡೌನ್‌ಲೋಡ್ ಹಾಗೂ ಬಳಕೆಗೆ ಸಂಬಂಧಿಸಿ ನೀವು ಭರಿಸುವ ಅಥವಾ ಮೂರನೇ ಪಕ್ಷವು ವಿಧಿಸುವ (ಉದಾ Google, Amazon, Apple) ಯಾವುದೇ ಶುಲ್ಕಗಳಿಗೆ ಹೊಣೆಗಾರನಾಗಿದ್ದು, ಇದನ್ನು ಕಾಲಕಾಲಕ್ಕೆ ಬದಲಾಯಿಸಬಹುದಾಗಿದೆ. ಈ ಒಪ್ಪಂದದ ಪ್ರಕಾರ, ತಂತ್ರಾಂಶ ಮತ್ತು ಸೇವೆಯ ಬಳಕೆಗಾಗಿ, ಅಂತಹ ಮೂರನೇ ಪಕ್ಷಗಳಿಗೆ ಮಾಡಿರುವ ಹಣಪಾವತಿಯನ್ನು Nuance ಯಾವ ರೀತಿಯಲ್ಲೂ ಹಿಂದಿರುಗಿಸುವ ಯಾವುದೇ ಬಾಧ್ಯತೆ ಹೊಂದಿಲ್ಲ. ಡೇಟಾ ಕಳುಹಿಸಲು ಮತ್ತು ಪಡೆಯಲು ತಂತ್ರಾಂಶ ಹಾಗೂ ಸೇವೆಗಳು ನಿಮ್ಮ ವೈರ್‌ಲೆಸ್‌ನೆಟ್‌‌ವರ್ಕ್‌ಅನ್ನು ಬಳಸುತ್ತವೆ ಮತ್ತು ಇದಕ್ಕಾಗಿ ನಿಮ್ಮ ತಂತ್ರಾಂಶ ಹಾಗೂ ಸೇವೆಗಳ ಏರ್‌ಟೈಮ್, ಡೇಟಾ ಮತ್ತು/ಅಥವಾ ಬಳಕೆಯ ಶುಲ್ಕಗಳಿಗಾಗಿ ಇತರೆ ಮೂರನೇ ಪಕ್ಷಗಳು ನಿಮಗೆ ಶುಲ್ಕ ವಿಧಿಸಬಹುದು.

2. ಪರವಾನಿಗಿಯ ಹೊಣೆಗಾರಿಕೆಗಳು.

2.1. ನಿರ್ಬಂಧಗಳು. ನೀವು ಇವುಗಳನ್ನು ಮಾಡಲಾಗದು (ಕಾನೂನು ಅನುಮತಿಸಿರುವುದನ್ನು ಹೊರತುಪಡಿಸಿ) : (a) ಬೇರೆ ರೀತಿಯಲ್ಲಿ ಲಿಖಿತವಾಗಿ ಅನುಮೋದಿಸದೇ ಇದ್ದಲ್ಲಿ ಯಾವುದೇ ಆಟೋಮೇಟೆಡ್ ಅಥವಾ ರೆಕಾರ್ಡ್ ಮಾಡಿದ ಪ್ರಶ್ನೆಗಳನ್ನು ತಂತ್ರಾಂಶದೊಂದಿಗೆ ಅಥವಾ ಸೇವೆಗೆ ಸಲ್ಲಿಸಿ; (b) ನಿಮ್ಮ ಸ್ವಂತ ಬಳಕೆಗೆ ಹೊರತು ಬೇರೆ ಯಾವುದಕ್ಕಾದರೂ ತಂತ್ರಾಂಶ ಮತ್ತು ಸೇವೆಯನ್ನು ಬಳಸಬಹುದು; (c) ಸೇವೆಯನ್ನು ತಂತ್ರಾಂಶದ ಮೂಲಕ ತಂತ್ರಾಂಶವಿಲ್ಲದೆ ಬೇರೆ ಯಾವುದಾದರೂ ರೀತಿಯಲ್ಲಿ ಪ್ರವೇಶಿಸುವುದು; (d) ತಂತ್ರಾಂಶವನ್ನು ಪೂರ್ತಿಯಾಗಿ ಅಥವಾ ಭಾಗಶಃ ನಕಲಿಸುವುದು, ಪುನರುತ್ಪತ್ತಿ ಮಾಡುವುದು ವಿತರಿಸುವುದು, ಅಥವಾ ಯಾವುದೇ ಇತರ ರೀತಿಯಲ್ಲಿ ತಂತ್ರಾಂಶದ ದ್ವಿಪ್ರತಿ ರೂಪಿಸುವುದು. (e) ತಂತ್ರಾಂಶ ಹಾಗೂ ಸೇವೆಯನ್ನು ಪೂರ್ತಿಯಾಗಿ ಅಥವಾ ಭಾಗಶಃ ಮಾರಾಟ ಮಾಡುವುದು, ಲೀಸ್‌ಗೆ ನೀಡುವುದು, ಪರವಾನಿಗಿ, ಮರುಪರವಾನಿಗಿ ನೀಡುವುದು, ವಿತರಣೆ ಮಾಡುವುದು, ನಿಯೋಜಿಸುವುದು, ವರ್ಗಾಯಿಸುವುದು ಅಥವಾ ಬೇರೆ ರೀತಿಯಲ್ಲಿ ಯಾವುದೇ ಹಕ್ಕುಗಳನ್ನು ನೀಡುವುದು; (f) ತಂತ್ರಾಂಶ ಅಥವಾ ಸೇವೆಯನ್ನು ಮಾರ್ಪಡಿಸುವುದು, ಪೋರ್ಟ್‌ಮಾಡುವುದು, ಅನುವಾದಿಸುವುದು, ಇದರಿಂದ ಪಡೆಯುವ ಕಾರ್ಯಗಳನ್ನು ರಚಿಸುವುದು. (g) ತಂತ್ರಾಂಶ ಅಥವಾ ಸೇವೆಯನ್ನು ಡೀಕಂಪೈಲ್, ಡೀಅಸೆಂಬಲ್ ರೀವರ್ಸ್ ಇಂಜಿನಿಯರಿಂಗ್ ಮಾಡುವುದು, ಅಥವಾ ಯಾವುದೇ ಸೋರ್ಸ್ ಕೋಡ್ , ತಂತ್ರಾಂಶದೊಳಗಿನ ಯಾವುದೇ ವಿಚಾರಗಳನ್ನು, ಅಲ್ಗಾರಿಧಮ್ಸ್ ಅನ್ನು ಯಾವುದೇ ರೀತಿಯಿಂದ ಪಡೆಯಲು, ಪುನ:ರಚಿಸಲು, ಗುರುತಿಸಲು, ಕಂಡುಹಿಡಿಯಲು ಯತ್ನಿಸುವುದು; (h) ತಂತ್ರಾಂಶದ ಯಾವುದೇ ಸ್ವಾಮ್ಯದ ಪ್ರಕಟಣೆಗಳು, ಲೇಬಲ್‌‌ಗಳು ಅಥವಾ ಗುರುತುಗಳನ್ನು ತೆಗೆದು ಹಾಕುವುದು ಅಥವಾ. (i) ತಂತ್ರಾಂಶ ಹಾಗೂ ಸೇವೆಯನ್ನು ಮೂರನೇ ಪಕ್ಷಗಳಿಂದ ಲಭ್ಯವಾಗಿಸಿರುವ ಉತ್ಪನ್ನಗಳ ಜೊತೆ ಹೋಲಿಸುವುದಕ್ಕಾಗಿ ಅಥವಾ ಬೆಂಚ್‌ಮಾರ್ಕಿಂಗ್‌ಗೆ ಬಳಸುವುದು.

3. ಮಾಲೀಕತ್ವದ ಹಕ್ಕುಗಳು.

3.1. ತಂತ್ರಾಂಶ ಮತ್ತು ಸೇವೆ. ತಂತ್ರಾಂಶ ಹಾಗೂ ಸೇವೆಗೆ ಸಂಬಂಧಿಸಿದಂತೆ ಎಲ್ಲಾ ಹಕ್ಕು, ಶೀರ್ಷಿಕೆ ಮತ್ತು ಹಿತಾಸಕ್ತಿ Nuance ಮತ್ತು ಅದರ ಪರವಾನಗಿ ನೀಡುವವರಾದಾಗಿದ್ದು ಎಲ್ಲಾ ಪೇಟೆಂಟ್, ಕೃತಿಸ್ವಾಮ್ಯ, ಟ್ರೇಡ್ ಸಿಕ್ರೇಟ್, ಟ್ರೇಡ್‌ಮಾರ್ಕ್ ಮತ್ತು ಇವುಗಳಿಗೆ ಸಂಬಂಧಿಸಿದ ಇತರ ಬೌದ್ಧಿಕ ಆಸ್ತಿಯ ಹಕ್ಕುಗಳನ್ನು ಮತ್ತು ಅಂತಹ ಹಕ್ಕುಗಳ ಶೀರ್ಷಿಕೆಗಳನ್ನು ಒಳಗೊಂಡು ಆದರೆ ಇವುಗಳಿಗಷ್ಟೇ ಸೀಮಿತವಾಗಿಲ್ಲದೇ ಎಲ್ಲವುಗಳೂ Nuance ಮತ್ತು/ಅಥವಾ ಅದರ ಪರವಾನಗಿ ನೀಡುವವರೊಂದಿಗೆ ಉಳಿಯುತ್ತದೆ. ತಂತ್ರಾಂಶ ಹಾಗೂ ಸೇವೆಯ ಅನಧಿಕೃತ ನಕಲು ಮಾಡುವಿಕೆ ಅಥವಾ ಮೇಲಿನ ನಿರ್ಬಂಧಗಳನ್ನು ಅನುಸರಿಸಲು ವೈಫಲ್ಯದಿಂದಾಗಿ , ಈ ಒಪ್ಪಂದ ಮತ್ತು ಅದರಡಿಯಲ್ಲಿ ನೀಡಲಾದ ಪರವಾನಗಿಗಳು ಸ್ವಯಂಚಾಲಿತವಾಗಿ ರದ್ದಾಗುತ್ತವೆ ಮತ್ತು ಅದರ ಉಲ್ಲಂಘನೆಗಾಗಿ Nuanceಗೆ ಎಲ್ಲಾ ಕಾಯ್ದೆಬದ್ಧ ಮತ್ತು ನ್ಯಾಯಸಮ್ಮತ ಪರಿಹಾರ ಲಭ್ಯವಾಗುವಂತೆ ಮಾಡುತ್ತೇವೆ.

3.2. ಮೂರನೇ ಪಕ್ಷದ ತಂತ್ರಾಂಶ. ತಂತ್ರಾಂಶವು ಮೂರನೇ ಪಕ್ಷದ ತಂತ್ರಾಂಶವನ್ನುಹೊಂದಿರಬಹುದಾಗಿದ್ದು ಇದಕ್ಕೆ ಜೊತೆಗೆ ಸೂಚನೆಗಳು ಮತ್ತು/ಅಥವಾ ಹೆಚ್ಚುವರಿ ಷರತ್ತುಗಳು, ನಿಬಂಧನೆಗಳು ಒಳಗೊಂಡಿರಬಹುದು. ಇಂತಹ ಅಗತ್ಯವಿರುವ ಮೂರನೇ ಪಕ್ಷದ ತಂತ್ರಾಂಶ ಸೂಚನೆಗಳು ಮತ್ತು/ಅಥವಾ ಹೆಚ್ಚುವರಿ ಷರತ್ತುಗಳು, ನಿಬಂಧನೆಗಳು http://swype.com/attributions ಇಲ್ಲಿ ಲಭ್ಯವಿರುತ್ತವೆ ಮತ್ತು ಇವನ್ನು ಈ ಒಪ್ಪಂದದ ಒಂದು ಭಾಗವಾಗಿಸಲಾಗಿದೆ ಹಾಗೂ ಉಲ್ಲೇಖ ಮೂಲಕ ಸೇರಿಸಲಾಗಿದೆ. ಈ ಒಪ್ಪಂದವನ್ನು ಒಪ್ಪಿಕೊಳ್ಳುವ ಮೂಲಕ, ನೀವು ಇಲ್ಲಿ ನಿಗದಿಪಡಿಸಲಾಗುವ ಯಾವುದೇ ಹೆಚ್ಚುವರಿ ನಿಯಮಗಳು ಮತ್ತು ಷರತ್ತುಗಳಿದ್ದರೆ ಅವುಗಳನ್ನು ಕೂಡ ಒಪ್ಪುತ್ತೀರಿ.

3.3. ಸ್ಪೀಚ್ ಡೇಟಾ ಮತ್ತು ಪರವಾನಿಗಿ ಡೇಟಾ .

(a) ಸ್ಪೀಚ್ ಡೇಟಾ. ಸೇವೆಯ ಭಾಗವಾಗಿ, ಸ್ಪೀಚ್ ಡೇಟಾವನ್ನು Nuance ಕೆಳಗೆ ತಿಳಿಸಿದಂತೆ ಸ್ಪೀಚ್ ಗುರುತಿಸುವಿಕೆ ಹಾಗೂ ಸೇವೆಯ ಇತರ ಘಟಕಗಳನ್ನು ಹಾಗೂ ಇತರ Nuance ಸೇವೆಗಳು ಮತ್ತು ಉತ್ಪನ್ನಗಳನ್ನು ಸರಿಪಡಿಸಲು,ಉತ್ತೇಜಿಸಲು ಮತ್ತು ಸುಧಾರಿಸಲು ಸಂಗ್ರಹಿಸುತ್ತವೆ ಮತ್ತು ಬಳಸುತ್ತವೆ ಈ ಒಪ್ಪಂದದ ನಿಯಮಗಳು ಮತ್ತು ಷರತ್ತುಗಳನ್ನು ಸ್ವೀಕರಿಸುವಲ್ಲಿ, Nuance ಸೇವೆಯ ಭಾಗವಾಗಿ ಸ್ಪೀಚ್‌ ಡೇಟಾ ಸಂಗ್ರಹಿಸಬಹುದು ಮತ್ತು ಬಳಸಬಹುದು ಎಂದು ನೀವು ಅಂಗೀಕರಿಸಿದ್ದೀರಿ, ಸಮ್ಮತಿಸಿದ್ದೀರಿ ಮತ್ತು ಒಪ್ಪುತ್ತೀರಿ, ಮತ್ತು ಇಂತಹ ಪರವಾನಿಗಿ ಡೇಟಾವನ್ನು Nuance ಅಥವಾ ಗೌಪ್ಯತೆಯ ಒಪ್ಪಂದಗಳ ಅನುಸಾರವಾಗಿ Nuanceನ ನಿರ್ದೇಶನದಲ್ಲಿ ಕೆಲಸ ಮಾಡುವ ಮೂರನೇ ಪಕ್ಷಗಳು ಮಾತ್ರವೇ, ಸ್ಪೀಚ್ ಗುರುತಿಸುವಿಕೆ ಹಾಗೂ ಸೇವೆಯ ಇತರ ಘಟಕಗಳನ್ನು ಹಾಗೂ ಇತರ Nuance ಸೇವೆಗಳು ಮತ್ತು ಉತ್ಪನ್ನಗಳನ್ನು ಸರಿಪಡಿಸಲು,ಉತ್ತೇಜಿಸಲು ಮತ್ತು ಸುಧಾರಿಸಲು ಬಳಸುತ್ತವೆ ಮೇಲೆ ಸೂಚಿಸಿದ್ದನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ Nuance ಯಾವುದೇ ಸ್ಪೀಚ್‌ ಡೇಟಾದಲ್ಲಿರುವ ಮಾಹಿತಿ ಅಂಶಗಳನ್ನು ಬಳಸುವುದಿಲ್ಲ. "ಸ್ಪೀಚ್ ಡೇಟಾ" ಎಂದರೆ ಆಡಿಯೋ ಫೈಲ್‌‌ಗಳು, ಸಂಬಂಧಿಸಿದ ಟ್ರಾನ್ಸ್ ಸ್ಕ್ರಿಪ್ಷನ್‌ಗಳು ಮತ್ತು ಈ ಮೂಲಕ ನೀವು ಒದಗಿಸಿದ ಹಾಗೂ ಸೇವೆಯೊಂದಿಗೆ ಉಂಟಾದ ಲಾಗ್ ಫೈಲ್‌ಗಳನ್ನು ಒಳಗೊಂಡಿರುತ್ತವೆ ನೀವು ಒದಗಿಸಿದ ಯಾವುದೇ ಮತ್ತು ಎಲ್ಲಾ ಸ್ಪೀಚ್ ಡೇಟಾ ಗೌಪ್ಯವಾಗಿಡಲಾಗುವುದು ಮತ್ತು ಒಂದೊಮ್ಮೆ ಅಗತ್ಯವಾದಲ್ಲಿ, ನ್ಯಾಯಾಲಯದ ಆದೇಶದ ಅಡಿಯಲ್ಲಿ ಅಥವಾ ಸರ್ಕಾರಿ ಸಂಸ್ಥೆಯಂತಹ ಕಾನೂನು ಅಥವಾ ನಿಯಮಾವಳಿಯ ಅವಶ್ಯಕತೆಗಳನ್ನು ಪೂರೈಸಲು ಅಥವಾ Nuance ಜೊತೆ ಮತ್ತೊಂದು ಸಂಸ್ಥೆಯ ಒಂದು ಮಾರಾಟ, ವಿಲೀನ ಅಥವಾ ಸ್ವಾಧೀನಪಡಿಸಿಕೊಳ್ಳುವಿಕೆ ಸಂಭವಿಸಿದಾಗ, ಕಾನೂನಿನ ಪ್ರಕಾರ ಅಗತ್ಯವಾದಲ್ಲಿ,. Nuance ಬಹಿರಂಗ ಮಾಡಬಹುದು,

(b) ಪರವಾನಿಗಿ ಡೇಟಾ. ತಂತ್ರಾಂಶದ ಹಾಗೂ ಸೇವೆಯ ನಿಮ್ಮ ಬಳಕೆಯ ಭಾಗವಾಗಿ, Nuance ಮತ್ತು ಅದರ ಪೂರೈಕೆದಾರರು ಕೆಳಗೆ ವಿವರಿಸಿದಂತೆ ಪರವಾನಿಗಿ ಡೇಟಾವನ್ನು ಸಂಗ್ರಹಿಸಬಹುದು ಮತ್ತು ಉಪಯೋಗಿಸಬಹುದು. ತಂತ್ರಾಂಶದ ಹಾಗೂ ಸೇವೆಯ ನಿಮ್ಮ ಬಳಕೆಯ ಭಾಗವಾಗಿ Nuance ಪರವಾನಿಗಿ ಡೇಟಾ ಸಂಗ್ರಹಿಸಬಹುದು ಮತ್ತು ಬಳಸಬಹುದು ಎಂದು ನೀವು ಅಂಗೀಕರಿಸಿದ್ದೀರಿ ಮತ್ತು ಒಪ್ಪಿಕೊಳ್ಳುತ್ತೀರಿ, ಪರವಾನಿಗಿ ಡೇಟಾವನ್ನು Nuance ಅಥವಾ ಗೌಪ್ಯತಾ ಒಪ್ಪಂದಗಳನ್ನು ಒಪ್ಪಿರುವ Nuance ನಿರ್ದೇಶನಗಳ ಅಡಿಯಲ್ಲಿ ಕೆಲಸ ಮಾಡುತ್ತಿರುವ ಮೂರನೇ ಪಕ್ಷಗಳಿಗೆ ತನ್ನ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲು, ರೂಪಿಸಲು ಮತ್ತು ಸುಧಾರಿಸಲು ನೆರವಾಗುವುದಕ್ಕೆ ಬಳಲಾಗುತ್ತದೆ. ಪರವಾನಿಗಿ ಡೇಟಾವನ್ನು ವೈಯಕ್ತಿಕವಲ್ಲದ ಮಾಹಿತಿಯೆಂದು ಪರಿಗಣಿಸಲಾಗುತ್ತದೆ; ಅಂದರೆ ಡೇಟಾವು ಯಾವುದೇ ನಿರ್ದಿಷ್ಟ ವ್ಯಕ್ತಿಗೆ ನೇರವಾಗಿ ಸಂಬಂಧಿಸಿಲ್ಲದ ರೂಪದಲ್ಲಿದೆ ಎನ್ನುವಂತೆ ಪರಿಗಣಿಸಲಾಗುತ್ತದೆ. "ಪರವಾನಿಗಿಯ ಡೇಟಾ" ಎಂದರೆ ತಂತ್ರಾಂಶ ಮತ್ತು ನಿಮ್ಮ ಸಾಧನದ ಬಗ್ಗೆ ಮಾಹಿತಿ ಎಂಧರ್ಥ ಉದಾಹರಣೆಗೆ, : ಸಾಧನದ ಬ್ರ್ಯಾಂಡ್, ಮಾಡೆಲ್ ಸಂಖ್ಯೆ, ಪ್ರದರ್ಶನ, ಸಾಧನದ ಐಡಿ, IP ವಿಳಾಸ, ಮತ್ತು ಇದೇ ರೀತಿಯ ಮಾಹಿತಿ.

(c) ಈ ಒಪ್ಪಂದಕ್ಕೆ ನಿಮ್ಮ ಒಪ್ಪಿಗೆಯ ಮೂಲಕ ನೀವು ಯುನೈಟೆಡ್ ಸ್ಟೇಟ್ಸ್ ಮತ್ತು/ಅಥವಾ ಬೇರೆ ದೇಶಗಳಿಗೆ ಸಂಗ್ರಹಣೆ, ಪ್ರಕ್ರಿಯೆಗೊಳಪಡಿಸುವಿಕೆ ಮತ್ತು Nuance, ಇದರ ಅಂಗಸಂಸ್ಥೆಗಳು ಮತ್ತು ಅಧಿಕೃತ ಮೂರನೇ ಪಕ್ಷಗಳಿಗೆ ಬಳಕೆಗಾಗಿ ವರ್ಗಾಯಿಸುವುದನ್ನು ಒಳಗೊಂಡಂತೆ ಇಲ್ಲಿ ಪರವಾನಿಗಿ ಡೇಟಾ ಮತ್ತು ಸ್ಪೀಚ್‌ಡೇಟಾದಲ್ಲಿ ನಿಗದಿಪಡಿಸಿರುವ ಸಂಗ್ರಹಣೆ ಮತ್ತು ಬಳಕೆಗೆ ಒಪ್ಪಿರುತ್ತೀರಿ ಎಂದು ಅರ್ಥಮಾಡಿಕೊಂಡಿದ್ದೀರಿ,

(d) ಸ್ಪೀಚ್ ಡೇಟಾ ಮತ್ತು ಪರವಾನಿಗಿ ಡೇಟಾ Nuanceನ ಅನ್ವಯಿಸುವ ಖಾಸಗಿತನದ ನೀತಿಗೆ ಒಳಪಟ್ಟಿರುತ್ತವೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ Nuance ಖಾಸಗಿತನದ ನೀತಿ ನೋಡಿ http://www.nuance.com/company/company-overview/company-policies/privacy-policies/index.htm.

4. ಬೆಂಬಲ. ತಂತ್ರಾಂಶ ಹಾಗೂ ಸೇವೆಯ ಮೌಲ್ಯಮಾಪನದ ಪ್ರಕ್ರಿಯೆಗೆ ಮತ್ತು ಪರೀಕ್ಷೆ ಮಾಡುವುದಕ್ಕೆ, ಪರವಾನಿಗಿದಾರರುhttp://www.nuancemobilelife.comನಲ್ಲಿ, Nuance ಪದೇ ಪದೇ ಕೇಳುವ ಪ್ರಶ್ನೆಗಳನ್ನು ಅನ್ನು ನೋಡಬಹುದು. ಹೆಚ್ಚುವರಿ ಬೆಂಬಲಕ್ಕಾಗಿ, ಪರವಾನಿಗಿದಾರರು ಮುಂದೆ ನೀಡಿರುವ ಸಾಗುವ ವೆಬ್‌ಸೈಟ್‌ ಮೂಲಕ ಅಂತಹ ಬೆಂಬಲವನ್ನು ಕೋರಬಹುದು, ಮತ್ತು Nuance ಸಿಬ್ಬಂದಿ ಲಭ್ಯತೆ ಮೇಲೆ ತಂತ್ರಾಂಶ ಹಾಗೂ ಸೇವೆಯ ಕಾರ್ಯನಿರ್ವಹಣೆಯ ಮತ್ತು ಲಕ್ಷಣಗಳ ದೋಷ ಮತ್ತು/ಅಥವಾ ಸ್ಪಷ್ಟೀಕರಣಕ್ಕಾಗಿ Nuance ಪರವಾನಿಗಿದಾರರಿಗೆ ಫ್ಯಾಕ್ಸ್, ಇಮೇಲ್ ಅಥವಾ ಇತರ ಮಾರ್ಗಗಳ ಮೂಲಕ ಸೂಕ್ತ ಬೆಂಬಲ ಸೇವೆಗಳನ್ನು ಒದಗಿಸಬಹುದು. Nuance ಸಪೋರ್ಟ್ 48 ವ್ಯವಹಾರದ ಗಂಟೆಗಳ ಒಳಗೆ (ವಾರಾಂತ್ಯಗಳಲ್ಲಿ ಮತ್ತು ಕಾನೂನು / ಕಂಪನಿ ರಜಾದಿನಗಳು ಹೊರತುಪಡಿಸಿ) ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತದೆ.

5. ವಾರಂಟಿಗಳ ಹಕ್ಕು ನಿರಾಕರಣೆ. NUANCE, ಅದರ ಪರವಾನಿಗಿ ನೀಡಿರುವವರು ಮತ್ತು ಪೂರೈಕೆದಾರರು ತಂತ್ರಾಂಶ ಹಾಗೂ ಸೇವೆಯನ್ನು ಕೇವಲ ನೀವು ಬಳಕೆ ಮಾಡುವುದಕ್ಕಾಗಿ ನಿಮಗೆ ಒದಗಿಸುತ್ತಿದ್ದಾರೆ ಎನ್ನುವುದನ್ನು ನೀವು ಅಂಗೀಕರಿಸಿದ್ದೀರಿ ಹಾಗೂ ಒಪ್ಪಿಕೊಳ್ಳುತ್ತೀರಿ. ಅದರ ಪರಿಣಾಮವಾಗಿ, ನೀವು ನಷ್ಟ ಅಥವಾ ಹಾನಿಯಿಂದ ನಿಮ್ಮ ಡೇಟಾ ಮತ್ತು ಸಿಸ್ಟಮ್ ರಕ್ಷಿಸಲು ಅಗತ್ಯ ಮುನ್ನೆಚ್ಚರಿಕೆಗಳು ಮತ್ತು ರಕ್ಷಣೋಪಾಯಗಳನ್ನು ತೆಗೆದುಕೊಳ್ಳಲು ಒಪ್ಪಿಕೊಳ್ಳುತ್ತೀರಿ. NUANCE, ಅದರ ಪರವಾನಿಗಿ ನೀಡಿರುವವರು ಮತ್ತು ಪೂರೈಕೆದಾರರು ತಂತ್ರಾಂಶ ಹಾಗೂ ಸೇವೆಯನ್ನು "ಹೇಗಿದೆಯೋ ಹಾಗೆ" ಎಲ್ಲ ದೋಷಗಳ ಜೊತೆ ಮತ್ತು ಯಾವುದೇ ರೀತಿಯ ವ್ಯಾರೆಂಟಿ ಇಲ್ಲದೇ ಒದಗಿಸುವುದನ್ನು ಅಂಗೀಕರಿಸುತ್ತೀರಿ ಮತ್ತು ಒಪ್ಪಿಕೊಳ್ಳುತ್ತೀರಿ. ಅನ್ವಯಿಸುವ ಕಾನೂನು ಅನುಮತಿಸುವ ಗರಿಷ್ಠ ಮಿತಿಗೆ ಒಳಪಟ್ಟು NUANCE ಮತ್ತು ಅದರ ಪರವಾನಿಗಿ ನೀಡಿರುವವರು ಮತ್ತು ಪೂರೈಕೆದಾರರು ಯಾವುದೇ ವಾಣಿಜ್ಯಿಕ ವಾರಂಟಿಗಳು, ನಿರ್ದಿಷ್ಟ ಉದ್ದೇಶಕ್ಕೆ ಸರಿಹೊಂದುವಿಕೆ, ಅಥವಾ ಉಲ್ಲಂಘನೆ ಮಾಡದಿರುವ ವಾರೆಂಟಿಗಳನ್ನು ಒಳಗೊಂಡು, ಆದರೆ ಅವುಗಳಿಗೆ ಸೀಮಿತವಾಗಿಲ್ಲದೇ ಯಾವುದೇ ಸುವ್ಯಕ್ತ ಅಥವಾ ಸುವ್ಯಕ್ತವಾಗಿಲ್ಲದ ವಾರೆಂಟಿಗಳನ್ನು ನಿರ್ದಿಷ್ಟವಾಗಿ ಹಕ್ಕು ನಿರಾಕರಿಸುತ್ತವೆ

6. ಹೊಣೆಗಾರಿಕೆಯ ಮಿತಿ. ಅನ್ವಯಿಸುವ ಕಾನೂನು ಅನುಮತಿಸುವ ಗರಿಷ್ಠ ಮಿತಿಗೆ ಒಳಪಟ್ಟು, ಯಾವುದೇ ಸಂದರ್ಭದಲ್ಲಿ NUANCE, ಅದರ ಅಂಗಸಂಸ್ಥೆಗಳು, ಅಧಿಕಾರಿಗಳು, ನಿರ್ದೇಶಕರು ಮತ್ತು ಉದ್ಯೋಗಿಗಳು, ಪೂರೈಕೆದಾರರು ಅಥವಾ ಇದರ ಪರವಾನಿಗಿ ನೀಡುವವರು ತಂತ್ರಾಂಶದ ಅಥವಾ ಸೇವೆಯ ಬಳಕೆಯಿಂದ ಉಂಟಾಗುವ, ಯಾವುದೇ ಹೊಣೆಗಾರಿಕೆ ಸಿದ್ಧಾಂತದ ಅಡಿಯಲ್ಲಿ, ಸಲಹೆ ಮಾಡಿದ್ದರೂ ಅಥವಾ ಅಂತಹ ಹಾನಿಗಳ ಉಂಟಾಗುವಿಕೆ ಸಾಧ್ಯತೆಯು ಮೊದಲೇ ತಿಳಿಯಬೇಕಾಗಿದ್ದರೂ ಕೂಡ ಅಂತಹ ಸ್ವತ್ತುಗಳಿಗೆ ಹಾನಿ, ಡೇಟಾ ಹಾನಿ, ಬಳಕೆಯ ಹಾನಿ, ವ್ಯಾವಹಾರಿಕ ಅಡೆತಡೆ ಅಥವಾ ಭರಿಸುವಿಕೆಯ ವೆಚ್ಚ ಒಳಗೊಂಡು, ಆದರೆ ಅವುಗಳಿಗೆ ಸೀಮಿತವಾಗಿಲ್ಲದೇ ಯಾವುದೇ ನೇರ, ಪರೋಕ್ಷ, ವಿಶೇಷ, ಸಾಂದರ್ಭಿಕ, ಪರಿಣಾಮಾತ್ಮಕ ಅಥವಾ ಎಚ್ಚರಿಕೆಯ ದಂಡದ ಹಾನಿಗಳಿಗೆ ಹೊಣೆಯಾಗಿರುವುದಿಲ್ಲ.

7. ಅವಧಿ ಮತ್ತು ಮುಕ್ತಾಯ. ನೀವು ಈ ಒಪ್ಪಂದದ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿದಾಗಿನಿಂದ ಈ ಒಪ್ಪಂದವು ಆರಂಭಗೊಳ್ಳುತ್ತದೆ ಮತ್ತು ಅವನ್ನು ಮುಕ್ತಾಯಗೊಳಿಸಿದಾಗ ಒಪ್ಪಂದದ ವಾಯಿದೆ ಮುಕ್ತಾಯಗೊಳ್ಳುವುದು. Nuance ಅದರ ಏಕಮಾತ್ರ ವಿಚಕ್ಷಣೆಯಲ್ಲಿ ಕಾರಣವಿಲ್ಲದೇ, ಕಾರಣದೊಂದಿಗೆ, ಸೇವೆ ಮುಕ್ತಾಯಗೊಂಡಿದೆ ಅಥವಾ ಅದನ್ನು ರದ್ದು ಪಡಿಸಲಾಗಿದೆ ಎಂದು ತಿಳಿಸುವ ಮೂಲಕ ಈ ಒಪ್ಪಂದವನ್ನು ಮತ್ತು / ಅಥವಾ ಇದರಡಿಯಲ್ಲಿ ನೀಡಿರುವ ಪರವಾನಿಗಿಗಳನ್ನು ಮುಕ್ತಾಯಗೊಳಿಸಬಹುದು. ನೀವು ಯಾವುದೇ ನಿಯಮಗಳನ್ನು ಮತ್ತು ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಈ ಒಪ್ಪಂದವು ಸ್ವಯಂಚಾಲಿತವಾಗಿ ಮುಕ್ತಾಯಗೊಳ್ಳುವುದು. ರದ್ದತಿಯ ಸಂದರ್ಭದಲ್ಲಿ, ನೀವು ತಕ್ಷಣ ಬಳಕೆ ಮಾಡುವುದನ್ನು ನಿಲ್ಲಿಸಬೇಕು ಹಾಗೂ ತಂತ್ರಾಂಶದ ಎಲ್ಲಾ ಪ್ರತಿಗಳನ್ನು ಡಿಲೀಟ್ ಮಾಡಬೇಕು.

8. ರಫ್ತಿನ ಬದ್ಧತೆ. ನೀವು ಇವುಗಳ ಕುರಿತು ತಿಳಿಸುವಿರಿ ಮತ್ತು ಖಾತ್ರಿ ನೀಡುವಿರಿ (i) ನೀವು ಯು.ಎಸ್‌. ಸರ್ಕಾರವು ನಿರ್ಬಂಧ ವಿಧಿಸಿರುವ ದೇಶದಲ್ಲಿ ಅಥವಾ ಯು.ಎಸ್‌.ಸರ್ಕಾರವು "ಭಯೋತ್ಪಾದಕರಿಗೆ ನೆರವು ನೀಡುವ" ದೇಶ ಎಂದು ನಿರ್ಣಯಿಸಿರುವ ದೇಶದಲ್ಲಿ ಇರುವುದಿಲ್ಲ; ಮತ್ತು (ii) ನೀವು ಯು.ಎಸ್‌. ಸರ್ಕಾರದ ಯಾವುದೇ ನಿಷೇಧಿತ ಅಥವಾ ನಿರ್ಬಂಧಿತ ಪಕ್ಷಗಳ ಪಟ್ಟಿಯಲ್ಲಿ ಇರುವುದಿಲ್ಲ.

9. ಟ್ರೇಡ್ ಮಾರ್ಕ್ಸ್. ತಂತ್ರಾಂಶದಲ್ಲಿ ಒಳಗೊಂಡಿರುವ ಮೂರನೇ ಪಕ್ಷದ ಟ್ರೇಡ್‌ಮಾರ್ಕ್‌ಗಳು, ವ್ಯಾಪಾರ ಹೆಸರುಗಳು, ಉತ್ಪನ್ನದ ಹೆಸರುಗಳು ಮತ್ತು ಲೋಗೋಗಳು ("ಟ್ರೇಡ್‌ಮಾರ್ಕ್‌ಗಳು") ಅವುಗಳ ಕ್ರಮವಾದ ಮಾಲಿಕರ ಟ್ರೇಡ್‌ಮಾರ್ಕ್‌ಗಳು ಅಥವಾ ನೋಂದಾಯಿತ ಟ್ರೇಡ್‌‌ಮಾರ್ಕ್‌ಗಳು ಆಗಿದ್ದು ಅಂತಹ ಟ್ರೇಡ್‌‌ಮಾರ್ಕ್‌ನ ಬಳಕೆಯು ಟ್ರೇಡ್‌‌ಮಾರ್ಕ್‌ಮಾಲಿಕರ ಪ್ರಯೋಜನಕ್ಕಾಗಿ ಜಾರಿಯಲ್ಲಿರುತ್ತವೆ. ಇಂತಹ ಟ್ರೇಡ್‌ಮಾರ್ಕ್‌ಗಳ ಬಳಕೆಯನ್ನು ಅಂತರ್‌ಚಲನಸಾಧ್ಯತೆಯನ್ನು ವಿವರಿಸುವ ಉದ್ದೇಶ ಹೊಂದಿರುತ್ತವೆ ಮತ್ತು ಇವುಗಳನ್ನು ಉಂಟುಮಾಡುವುದಿಲ್ಲ (i) ಇಂತಹ ಕಂಪನಿಯೊಂದಿಗೆ Nuanceನ ಸಹಯೋಗ, ಅಥವಾ (ii) Nuanceನಿಂದ ಅಂತಹ ಕಂಪನಿಯ ಮತ್ತು ಅದರ ಉತ್ಪನ್ನಗಳು ಅಥವಾ ಸೇವೆಗಳ ದೃಢಪಡಿಸುವಿಕೆ ಅಥವಾ ಅನುಮೋದನೆ.

10. ನಿಯಂತ್ರಿಸುವ ಕಾನೂನು. ಈ ಒಪ್ಪಂದವನ್ನು ಕಾಯಿದೆಗಳ ತತ್ವಗಳಿಗೆ ಸಂಘರ್ಷಗಳ ಪರಿಗಣನೆ ಇಲ್ಲದೇ ಇದು ಯುನೈಟೆಡ್‌ಸ್ಟೇಟ್ಸ್ ಆಫ್ ಅಮೇರಿಕಾದ ಕಾಮನ್‌ವೆಲ್ತ್ ಆಫ್ ಮೆಸಾಚುಸೆಟ್ಸ್ ಕಾನೂನುಗಳ ನಿಯಂತ್ರಣಕ್ಕೆ ಒಳಪಟ್ಟಿದೆ ಮತ್ತು ಈ ಈ ಒಪ್ಪಂದಿಂದ ಉಂಟಾಗುವ ಯಾವುದೇ ವಾದ ವಿವಾದಗಳಿಗೆ ಸಂಬಂಧಿಸಿ ಹೇಳಲಾದ ಕಾಮನ್‌ವೆಲ್ತ್‌ಫೆಡರಲ್ ಹಾಗೂ ರಾಜ್ಯ ಕೋರ್ಟ್‌ಗಳ ಅನನ್ಯ ನ್ಯಾಯಾಲಯ ವ್ಯಾಪ್ತಿಗೆ ಒಳಪಟ್ಟಿದೆ ಎನ್ನುವುದನ್ನು ಈ ಮೂಲಕ ಒಪ್ಪಿಕೊಳ್ಳುತ್ತೀರಿ. ಈ ಒಪ್ಪಂದವು ಅಂತರಾಷ್ಟ್ರೀಯ ವಸ್ತುಗಳ ಮಾರಾಟಕ್ಕಾಗಿ ಯುನೈಟೆಡ್ ನೇಷನ್ಸ್ ಕನ್ ವೆನ್ಷನ್ ಆಫ್ ಕಾಂಟ್ರಾಕ್ಟ್ಸ್ ನ ನಿಯಂತ್ರಣಕ್ಕೆ ಒಳಪಟ್ಟಿಲ್ಲ, ಈ ಮೂಲಕ ಈ ಕಾನೂನಿನ ಬಳಕೆಯನ್ನು ಸುವ್ಯಕ್ತವಾಗಿ ಹೊರತುಪಡಿಸಲಾಗಿದೆ.

11. ಬದಲಾಗಬಹುದಾದ ನಿಯಮಗಳು. Nuance ನಿಮ್ಮ ಇಮೇಲ್‌ವಿಳಾಸವನ್ನು ಒಳಗೊಂಡು ನೀವು ಸೈನ್‌ಅಪ್ ಮಾಡುವ ವೇಳೆಯಲ್ಲಿ ಒದಗಿಸಿದ ವಿಳಾಸಕ್ಕೆ, ತರ್ಕಬದ್ಧ ಸೂಚನೆಗಳನ್ನು ಕಳುಹಿಸುವ ಮೂಲಕ ಈ ಒಪ್ಪಂದದ ನಿಯಮಗಳು ಮತ್ತು ಷರತ್ತುಗಳನ್ನು ಕಾಲಕಾಲಕ್ಕೆ ಬದಲಾಯಿಸಬಹುದು. ಈ ಒಪ್ಪಂದದಲ್ಲಿ ತಿಳಿಸಿರುವ ಅಂತಹ ಬದಲಾವಣೆಗಳಿಗೆ ನೀವು ಒಪ್ಪದೇ ಇದ್ದರೆ, ತಂತ್ರಾಂಶ ಮತ್ತು ಸೇವೆಯ ಬಳಕೆಯನ್ನು ನಿಲ್ಲಿಸುವುದೊಂದೇ ನಿಮಗಿರುವ ಸಾಧ್ಯತೆಯಾಗಿರುತ್ತದೆ. Nuance ಅಂತಹ ಬದಲಾವಣೆಯ ಕುರಿತು ತರ್ಕಬದ್ಧ ಸೂಚನೆಯನ್ನು ನಿಮ್ಮ ಪರಿಶೀಲನೆಗಾಗಿ ನೀಡಿದ ನಂತರವೂ ಕೂಡ ತಂತ್ರಾಂಶದ ಮತ್ತು ಸೇವೆಯ ಯಾವುದೇ ಭಾಗವನ್ನು ಬಳಸುತ್ತಿದ್ದಲ್ಲಿ, ನೀವು ಬದಲಾವಣೆಗೆ ಒಪ್ಪಿಕೊಂಡಿರುವಿರಿ ಎಂಬುದಾಗಿ ಪರಿಗಣಿಸಲಾಗುವುದು.

12. ಸಾಮಾನ್ಯ ಕಾನೂನು ನಿಯಮಗಳು. Nuanceನ ಪೂರ್ವ ಲಿಖಿತ ಅನುಮತಿ ಇಲ್ಲದೆ ಈ ಒಪ್ಪಂದದಡಿ ಯಾವುದೇ ಹಕ್ಕು ಅಥವಾ ಹೊಣೆಗಾರಿಕೆಗಳನ್ನು ನಿಯೋಜಿಸಲು ಅಥವಾ ಇಲ್ಲದಿದ್ದಲ್ಲಿ ವರ್ಗಾಯಿಸಲು ಸಾಧ್ಯವಿಲ್ಲ. ಈ ಒಪ್ಪಂದ Nuance ಮತ್ತು ನಿಮ್ಮ ನಡುವೆ ಸಂಪೂರ್ಣ ಒಪ್ಪಂದವಾಗಿದೆ ಮತ್ತು ತಂತ್ರಾಶಕ್ಕೆ ಸಂಬಂಧಿಸಿದಂತೆ ಯಾವುದೇ ಇತರ ಸಂವಹನ ಅಥವಾ ಜಾಹೀರಾತುಗಳನ್ನು ರದ್ದುಗೊಳಿಸುತ್ತದೆ. ಈ ಒಪ್ಪಂದದ ಯಾವುದೇ ನಿಯಮವು ಅಮಾನ್ಯ ಅಥವಾ ಜಾರಿಗೊಳಿಸಲಾಗದಿರುವುದು ಎಂದು ನಿರ್ಣಯಿಸಲ್ಪಟ್ಟಲ್ಲಿ ಅಂತಹ ನಿಯಮವನ್ನು ಅಮಾನ್ಯತೆ ಅಥವಾ ಜಾರಿಗೊಳಿಸಲು ಅನರ್ಹತೆಯಿಂದ ತಪ್ಪಿಸುವ ವ್ಯಾಪ್ತಿಯ ಮಟ್ಟಿಗೆ ಪರಿಷ್ಕರಿಸಲಾಗುತ್ತದೆ ಮತ್ತು ಈ ಒಪ್ಪಂದದ ಉಳಿದ ಎಲ್ಲ ಭಾಗ ಸಂಪೂರ್ಣವಾಗಿ ಜಾರಿಯಲ್ಲಿರುತ್ತದೆ ಮತ್ತು ಪರಿಣಾಮಕಾರಿಯಾಗಿರುತ್ತದೆ. ಈ ಒಪ್ಪಂದದ ಯಾವುದೇ ಹಕ್ಕು ಅಥವಾ ನಿಯಮವನ್ನು ಚಲಾಯಿಸುವುದಕ್ಕೆ ಅಥವಾ ಜಾರಿಗೊಳಿಸುವುದಕ್ಕೆ Nuance ವಿಫಲವಾದಲ್ಲಿ, ಅದು ಅಂತಹ ಹಕ್ಕು ಅಥವಾ ನಿಯಮಗಳನ್ನು ಬಿಟ್ಟುಕೊಟ್ಟಿದೆಯೆಂದು ಅರ್ಥ ನೀಡುವುದಿಲ್ಲ. ಈ ಒಪ್ಪಂದದ ಸೆಕ್ಷನ್ 2, 3, 5, 6, 7, 9, 10 ಮತ್ತು 12, ಈ ಒಪ್ಪಂದ ಮುಕ್ತಾಯಗೊಂಡರೂ ಅಥವಾ ಕೊನೆಗೊಂಡರೂ, ಅಸ್ತಿತ್ವವನ್ನು ಉಳಿಸಿಕೊಳ್ಳುತ್ತವೆ.